Mahad (Kannada)

180.00

Shipping calculated at checkout

ಮಹಾಡ್
ಪ್ರತಿನಿತ್ಯ ಆರಂಭವಾಗುತ್ತಿರುವ ಹೋರಾಟದ ನಡಿಗೆ
ಕನ್ನಡೀಕರಣ

ಪ್ರೊ. ಸುಮಾ ಪ್ರಿಯದರ್ಶಿನಿ, ಬಿ. ಕೆ.

ಸಂಪಾದಕರು
ಶ್ರೀಧರ ಅಘಲಯ
ಹಾರೋಹಳ್ಳಿ ರವೀಂದ್ರ
ಸಂಪಾದಕರು

1924 ರಲ್ಲಿ ಮಹಾಡ್ ಪುರಸಬೆಯು ಅಲ್ಲಿನ ಶೋಷಿತ ವರ್ಗಗಳಿಗೆ ಕೊಳದಿಂದ ಕುಡಿಯುವ ನೀರನ್ನು ತೆಗೆದುಕೊಳ್ಳಲು ಮತ್ತು ಅಸ್ಪೃಶ್ಯರ ಹಕ್ಕನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತ್ತು . ಈ ನಿರ್ಣಯವು ಅವಕಾಶ ನೀಡಿದ್ದರೂ, ಅಸ್ಪೃಶ್ಯರು ತೀವ್ರ ಪ್ರತೀಕಾರದ ಭಯದಿಂದ ಮಹಾಡ್ ಕೊಳವನ್ನು ಸಮೀಪಿಸಲು ಕೂಡ ಧೈರ್ಯ ಮಾಡಲಿಲ್ಲ. ಪುರಸಭೆಯಾಗಲಿ ಅಥವಾ ಯಾವುದೇ ಅನುಕೂಲಸ್ಥ ಹಿಂದೂಜಾತಿಯವರಾಗಲಿ ಈ ನಿರ್ಣಯವನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡಲಿಲ್ಲ . ಈ ಕಾರಣದಿಂದಲೇ ಮಹಾಡ್ ನಡಿಗೆಯನ್ನು ಸಿದ್ಧಪಡಿಸಲಾಗಿತ್ತು,ಬಹುಶಃ ಸಮಾನತೆಗಾಗಿ ಹೋರಾಟದ ನಡಿಗೆಯನ್ನು ಮುನ್ನಡೆಸಲು ಸಮಯವೇ ಅಂಬೇಡ್ಕರ್ ರವರಿಗಾಗಿ ಕಾಯುತ್ತಿತ್ತು ಅನಿಸುತ್ತೆ.

ದಂಡಿ ನಡಿಗೆಗೆ ಯಾವುದೇ ತುರ್ತು ಅಗತ್ಯವಿರಲಿಲ್ಲ. ಉಪ್ಪಿನ ಮೇಲಿನ ತೆರಿಗೆಯ ಕಾನೂನನ್ನು ಮುರಿಯಲು ಯಾವುದೇ ಒತ್ತಾಯದ ಅನಿವಾರ್ಯತೆ ಇರಲಿಲ್ಲ. ಇದನ್ನು ಮಾಡಲು ಯಾರೂ ಸಿದ್ಧರಿರಲಿಲ್ಲ. ಯಾವುದೇ ಪ್ರಬಲ ಅಪೇಕ್ಷೆಯು ಇರಲಿಲ್ಲ …

ಮಹಾಡ್ ನಲ್ಲಿ , ನಿಷೇಧಿತ ಕಾನೂನನ್ನು ಮುರಿಯಲು ಬಲವಾದ ಮತ್ತು ಸನ್ನಿಹಿತವಾದ ಕಾರಣವಿತ್ತು, ಅಸ್ಪೃಶ್ಯರು ಸಾಮಾನ್ಯ ಕೊಳದಿಂದ ಕುಡಿಯುವ ನೀರನ್ನು ತೆಗೆದುಕೊಳ್ಳುವುದನ್ನು ನಿಷೇಧಿಸುವ ಅಮಾನವೀಯ ಪದ್ಧತಿಯ ವಿರುದ್ಧ ಹೋರಾಡುವ ಅವಶ್ಯಕತೆಯಿತ್ತು . ಜನರು ಅದಕ್ಕಾಗಿ ಹಂಬಲಿಸುತ್ತಿದ್ದರು, ತುರ್ತಾಗಿ. ಹೋರಾಡಲು ಮತ್ತು ಸಾಯಲೂ ಸನ್ನದ್ಧರಾಗಿದ್ದರು.
ದಂಡಿ ನಡಿಗೆದಾರರು ನಿಷೇಧಿತ ಕಾನೂನಿದ್ದರೂ ಜೀವಿಸಬಹುದಿತ್ತು , ಆದರೆ ಮಹಾಡ್ ನಡಿಗೆದಾರರು ಈ ಅಮಾನವೀಯ ಕಾನೂನನ್ನು ಮುರಿಯದೆ ಮನುಷ್ಯರಾಗಿ ಬದುಕಲು ಸಾಧ್ಯವಿರಲಿಲ್ಲ. ದಂಡಿ ಒಂದು ಸಾಂಕೇತಿಕ ಮೆರವಣಿಗೆಯಾಗಿತ್ತು, ಆದರೆ ಮಹಾಡ ವಾಸ್ತವವಾಗಿ ಯುದ್ಧವಾಗಿತ್ತು..

ಬೊಜ್ಜ ತಾರಕಂ

Reviews

There are no reviews yet.

Be the first to review “Mahad (Kannada)”

Your email address will not be published. Required fields are marked *